ಮೃತರ ಹೆಸರಿನಲ್ಲಿರುವ ಜಮೀನಿಗೆ ಯಾವುದೇ ಸೌಲಭ್ಯ ಇಲ್ಲ: ಪೌತಿ ಖಾತೆ ಅಭಿಯಾನವನ್ನು ಗಂಭೀರವಾಗಿ ಕೈಗೆತ್ತಿಕೊಂಡ ಸರ್ಕಾರ
ಸಾವಿಗೀಡಾದ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳಿಗೆ ಯಾವುದೇ ಸರ್ಕಾರದ ಕೃಷಿ ಸಹಾಯಧನ, ಪರಿಹಾರ ಅಥವಾ ಪಿಂಚಣಿ ಸೌಲಭ್ಯಗಳು ಲಭ್ಯವಿಲ್ಲ ಎಂಬುದಾಗಿ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ. …