ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ! ಇಲ್ಲಿದೆ ಪೂರ್ಣ ಮಾಹಿತಿ. ಇಲ್ಲಿ ಅಪ್ಲೈ ಮಾಡಿ

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯದ ಸಣ್ಣ ರೈತರಿಗೆ ಮಹತ್ವದ ಸುದ್ದಿಯಾಗಿದೆ! ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದವರಿಂದ 2025-26ನೇ ಸಾಲಿನ ವಾಸವಿ ಜಲ ಶಕ್ತಿ/ಗಂಗಾ ಕಲ್ಯಾಣ ಯೋಜನೆಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ganga kalyana yojana aryavaishya apply last date july 31 2025
ganga kalyana yojana aryavaishya apply last date july 31 2025

ಈ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಸಹಾಯಧನ, ವಿದ್ಯುದ್ದೀಕರಣಕ್ಕೆ ಸಬ್ಸಿಡಿ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನಿಗಮ ನೀಡಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2025 ಜುಲೈ 31 ಆಗಿರುವುದರಿಂದ ತಡ ಮಾಡದೇ ಅರ್ಜಿ ಸಲ್ಲಿಸಿ!


ಯೋಜನೆಯ ಪ್ರಮುಖ ಉದ್ದೇಶ ಏನು?

ಈ ಯೋಜನೆಯ ಉದ್ದೇಶ, ನೀರಾವರಿ ಸೌಲಭ್ಯವಿಲ್ಲದ ಸಣ್ಣ ರೈತರಿಗೆ ಕೊಳವೆ ಬಾವಿ ಕೊರೆಸಿ ಕೃಷಿ ಹಾಗೂ ತೋಟಗಾರಿಕೆ ಬೆಳೆಯಲು ನೆರವಾಗುವುದು.


ಯೋಜನೆಯ ಸೌಲಭ್ಯಗಳು

ಸೌಲಭ್ಯವಿವರ
ಕೊಳವೆ ಬಾವಿ ಕೊರೆಸಲು₹2 ಲಕ್ಷ ವರೆಗಿನ ಸಾಲ (ಬಡ್ಡಿ ಶೇ. 4)
ವಿದ್ಯುದ್ದೀಕರಣ₹75,000 ಸಬ್ಸಿಡಿ
ಲೋನ್ ಸ್ವರೂಪಭದ್ರತೆ ರಹಿತ ಸಾಲ (Collateral Free Loan)
ಮರುಪಾವತಿ6 ತಿಂಗಳು ವಿರಾಮದ ನಂತರ 34 ಕಂತುಗಳಲ್ಲಿ ಮರುಪಾವತಿ
ನೀರಿಲ್ಲದ ಬಾವಿಗೆಅಸಲು ಮಾತ್ರ ಮರುಪಾವತಿ

ಅರ್ಜಿಗೆ ಅರ್ಹತೆಯ ಮಾನದಂಡಗಳು

  • ಸಾಮಾನ್ಯ ವರ್ಗದ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ್ದು ಇರಬೇಕು
  • ಅರ್ಜಿದಾರರು ಕರ್ನಾಟಕ ನಿವಾಸಿಯಾಗಿರಬೇಕು
  • 21 ರಿಂದ 55 ವರ್ಷ ವಯಸ್ಸಿನ ನಡುವೆ ಇರಬೇಕು
  • ವಾರ್ಷಿಕ ಕುಟುಂಬ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಕನಿಷ್ಠ 2 ಎಕರೆ, ಗರಿಷ್ಠ 15 ಎಕರೆ ಜಮೀನಿರುವ ಸಣ್ಣ ರೈತರಾಗಿರಬೇಕು
  • FRUITS ID ಕಡ್ಡಾಯ
  • ಬಿ.ಇ.ಇ (BEE) ಪ್ರಮಾಣಿತ 4 ಅಥವಾ 5 ಸ್ಟಾರ್ ಪಂಪ್‌ಸೆಟ್ ಬಳಸಬೇಕು
  • ಜಾತಿ/ಆದಾಯ ಪ್ರಮಾಣಪತ್ರ (ನಮೂನೆ-ಜಿ) ಕಡ್ಡಾಯ

ಅರ್ಜಿಯ ವಿಧಾನ (Online Application Process)

ಹಂತ 1: Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಗಮದ ಅಧಿಕೃತ ತಾಣ ಪ್ರವೇಶಿಸಬೇಕು
ಹಂತ 2: “Click to Proceed” ಆಯ್ಕೆ ಮಾಡಿ, ಆಧಾರ್ ನಂ. ಮತ್ತು ಮೊಬೈಲ್ OTP ನೊಂದಿಗೆ ಲಾಗಿನ್ ಆಗಿ
ಹಂತ 3: ಫಾರ್ಮ್ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ‘Submit’ ಕ್ಲಿಕ್ ಮಾಡಿ


ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಜಮೀನಿನ ದಾಖಲೆ
  • ಸಣ್ಣ ರೈತ ದೃಢೀಕರಣ ಪತ್ರ
  • FRUITS ಐಡಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿಗೆ ಆಧಾರ್ ಲಿಂಕ್ ಮಾಡಿರಬೇಕು

ಇದನ್ನೂ ಓದಿ:
📌 ಪ್ರಧಾನ ಮಂತ್ರಿ ಆವಾಸ್ ಯೋಜನೆ 2025: ಉಚಿತ ಮನೆಗೆ ಅರ್ಜಿ ಹೇಗೆ ಹಾಕಬೇಕು? ಯಾರಿಗೆ ಸಿಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ!


ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ

ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಮೂಲಕ ಅರ್ಹ ಅರ್ಜಿದಾರರ ಆಯ್ಕೆ ನಡೆಯುತ್ತದೆ. ಮಹಿಳೆಗಳಿಗೆ ಶೇ.33%, ವಿಶೇಷಚೇತನರಿಗೆ ಶೇ.5% ಹಾಗೂ ತೃತೀಯ ಲಿಂಗಿಗಳಿಗೆ ಶೇ.5% ಮೀಸಲಾತೆ ಇದೆ.


ಇತರೆ ಯೋಜನೆಗಳಿಗೂ ಅರ್ಜಿ ಹಾಕಬಹುದಾ?

ಹೌದು! ಈ ಯೋಜನೆಯ ಜೊತೆಗೆ ನಿಗಮದ ಇತರೆ ಯೋಜನೆಗಳಾದ:

  • ಸ್ವಯಂ ಉದ್ಯೋಗ ನೇರ ಸಾಲ ಯೋಜನೆ
  • ಆಹಾರ ವಾಹಿನಿ ಯೋಜನೆ
  • ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೂ ಅರ್ಜಿ ಹಾಕಬಹುದು.

📞 ಸಂಪರ್ಕ ಮಾಹಿತಿ

  • ಸಹಾಯವಾಣಿ: 9448451111
  • ನಿಗಮದ ವೆಬ್‌ಸೈಟ್: Click Here
  • ಆನ್‌ಲೈನ್ ಅರ್ಜಿ ಲಿಂಕ್: Apply Now

🛑 ಕೊನೆಯ ದಿನಾಂಕ: 2025 ಜುಲೈ 31
ಆದ್ದರಿಂದ ಅರ್ಹ ಫಲಾನುಭವಿಗಳು ತಕ್ಷಣವೇ ಅರ್ಜಿ ಸಲ್ಲಿಸಿ!



Leave a Comment